ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ.