ಇಲ್ಲೊಂದು ಚಿಲಿಪಿಲಿ, ಅಲ್ಲೊಂದು ವಾಹನದ ಹಾರ್ನ್! ಕೀಟಗಳ ಕಿರುಗುಡುವಿಕೆ, ನಾಯಿಯ ಬೊಗಳುವಿಕೆ, ಚರ್ಚ್‌ನ ಗಂಟೆ ಮತ್ತು ವಿವಿಧ ಪಕ್ಷಿಗಳ ಕಲರವ - ನಗರದಲ್ಲಿ ಇವೆಲ್ಲವೂ ಒಟ್ಟೊಟಿಗೆ ಕೇಳಿಸಬಹುದಾಗಿದ್ದು, ಇದೇ ಕಾರಣದಿಂದಲೇ ನಗರದಲ್ಲಿ ಪಕ್ಷಿಯಾಗಿ ಬದುಕುವುದು ಕಠಿಣಕಾರ್ಯ!. ಈ ಗಡಿಬಿಡಿಯ ಗಲಗಲದಲ್ಲಿ, ಸಂಗಾತಿಗೆ ಪಕ್ಷಿಯ ಕರೆ ಕೇಳಿಸುವುದು ಅಸಾಧ್ಯ! ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಗರಗಳೂ ಸೇರಿದಂತೆ ಎಲ್ಲೆಡೆ, ಪಕ್ಷಿಗಳು ತಮ್ಮ ಸಮೂಹಗಾನದಲ್ಲಿ ಸಮಯ, ಆವಾಸಸ್ಠಾನ ಮತ್ತು ವಿಶಿಷ್ಟ ಸೂಚನೆ ನೀಡುವ ಸಲುವಾಗಿ ಕೂಗಿನ ಸಂಖ್ಯೆಯಲ್ಲಿ ಬದಲಾವಣೆ ತರುವ ವಿವಿಧ ತಂತ್ರಗಳನ್ನು ಬಳಸುತ್ತವೆ.