Sorry, you need to enable JavaScript to visit this website.

Hypertension

ಬೆಂಗಳೂರು | Dec 11, 2019
ಅಧಿಕ ರಕ್ತದೊತ್ತಡವನ್ನು ನಿವಾರಿಸಲು ಭಾರತೀಯ ಶಾಸ್ತ್ರೀಯ ಸಂಗೀತವು ಸಹಾಯ ಮಾಡಬಹುದೇ?

ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ದೀರ್ಘಕಾಲದ ಕಾಯಿಲೆಗಳಲಿೢ ಒಂದು. ರಾಷ್ಟ್ರೀಯ ಆರೋಗ್ಯ ವಿವರ (ನ್ಯಾಷನಲ್ ಹೆಲ್ತ್ ಪೋರ್ಟಲ್ - ಎನ್‌.ಎಚ್‌.ಪಿ) ೨೦೧೯ ರ ಪ್ರಕಾರ, ೨೦೧೮ ರಲ್ಲಿ ಸರ್ಕಾರಿ ಚಿಕಿತ್ಸಾಲಯಗಳಿಗೆ ಭೇಟಿನೀಡಿದ ಎಲ್ಲ ರೋಗಿಗಳಲ್ಲಿ ೬.೧೯% ಜನರು ಅಧಿಕರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಮಧುಮೇಹದಿಂದ ಬಳಲುತ್ತಿರುವ ಜನರಿಗಿಂತ ಹೆಚ್ಚಾಗಿದೆ (ಸುಮಾರು ೪.೭೫% ರಷ್ಟು). ಆದರೆ ಎನ್‌.ಎಚ್‌.ಪಿಯಲ್ಲಿ ಖಾಸಗಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಜನರನ್ನು ಪರಿಗಣಿಸುವುದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್  ಪ್ರಕಾರ, ನಮ್ಮ ದೇಶದಲ್ಲಿ ೧೦.೧೮ %ರಷ್ಟು ಮರಣಗಳಿಗೆ ಅಧಿಕ ರಕ್ತದೊತ್ತಡ ಮುಖ್ಯ ಕಾರಣವಾಗಿದೆ.

General, Science, Health
ಬೆಂಗಳೂರು | Apr 30, 2018

ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಮುಂತಾದ ಸಾಂಕ್ರಾಮಿಕವಲ್ಲದ ರೋಗಗಳು, ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡದ ರೋಗಗಳು, ಇಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳಾಗಿವೆ. ಭಾರತದಲ್ಲಿ, ಸುಮಾರು ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿರುತ್ತದೆ ಮತ್ತು ೮% ರಷ್ಟು ಜನರಿಗೆ ಮಧುಮೇಹ ಇರುತ್ತದೆ ಎಂದು ತಿಳಿದುಬಂದಿದೆ. ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವೆಂದರೆ, ಸರ್ಕಾರದ ಬೆಂಬಲದೊಂದಿಗೆ ಬಲವಾದ ಆರೋಗ್ಯ ಸೇವೆ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಅದರ ಮುಖಾಂತರ, ಇಂತಹ ಖಾಯಿಲೆಗಳಿಗೆ ಔಷಧಿಗಳನ್ನು ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಲಭ್ಯವಿರುವಂತೆ ಮಾಡುವುದು.

General, Science, Health, Society, Deep-dive
Subscribe to Hypertension