“ನನ್ನ ಹೆಸರು ನಕುಸ, ನಾನು ಭಾರತದ ಅನಗತ್ಯ ಮಗಳು” ಎಂದು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಪುಟ್ಟ ಹುಡುಗಿ ಹೇಳುತ್ತಾಳೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಅಥವಾ ಅದಕ್ಕೂ ಮುಂಚಿನಿಂದಲೇ ನಿರ್ದಯವಾದ ಲಿಂಗತಾರತಮ್ಯವನ್ನು ಎದುರಿಸುತಿದ್ದಾರೆ. ಭಾರತದಲ್ಲಿನ ಹಲವಾರು ಸಮಾಜಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯಿಂದ, ಪ್ರತೀ ವರ್ಷ ಲಕ್ಷಾಂತರ ಹೆಣ್ಣುಮಕ್ಕಳು ಜೀವನದಿಂದ ವಂಚಿತರಾಗುತ್ತಿದ್ದಾರೆ ಮತ್ತು ಜನಿಸಿದರೂ ಸಹ ಎಲ್ಲಾ ರೀತಿಯ ಬೆಂಬಲವಿಲ್ಲದೇ ಕುಟುಂಬದ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ.