2019 ರಲ್ಲಿ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪುಣೆ (ಐಐಎಸ್ಇಆರ್ ಪುಣೆ), ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರ, ಪುಣೆ (ಎನ್‌ಸಿಸಿಎಸ್) ಮತ್ತು ಪುಣೆಯ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್, ಸಂಸ್ಥೆಗಳ ಸಹಯೋಗದೊಂದಿಗೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ) ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಪ್ರಾರಂಭಿಸಿದೆ. ಮಾನವ್ - ದಿ ಹ್ಯೂಮನ್ ಅಟ್ಲಾಸ್ ಇನಿಶಿಯೇಟಿವ್ ಎಂದು ಕರೆಯಲ್ಪಡುವ ಇದು, ದೇಶದ ಮೊದಲ ಇಂತಹ ಯೋಜನೆಯಾಗಿದೆ.