ವರ್ಚಸ್ವಿ ಪ್ರಾಣಿಗಳಲ್ಲಿ ಒಂದಾದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಪ್ರಪಂಚದಾದ್ಯಂತ ಪ್ರಾಣಿಸಂರಕ್ಷಣೆಯ ಮುಖವಾಗಿ ಬಳಸಲಾಗುತ್ತಿದೆ. 2019 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತರ್ರಾಷ್ಟ್ರೀಯ ಹುಲಿ ದಿನವಾದ ಜುಲೈ 29 ರಂದು 2018 ರ ರಾಷ್ಟ್ರೀಯ ಹುಲಿ ಗಣತಿ (ಎನ್‌ಟಿಇ) ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದರು. ಉದ್ದೇಶಿತ ಗಡುವಿಗೆ ನಾಲ್ಕು ವರ್ಷಗಳ ಮೊದಲೇ ಭಾರತವು ತನ್ನ ಹುಲಿ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.