ಮನುಷ್ಯ ತನ್ನ ನೂರಾರು ಆಸೆಗಳನ್ನು ಪೂರೈಸಿಕೊಳ್ಳುವ ಮತ್ತು ಆಧುನಿಕ ಜೀವನಶೈಲಿಯನ್ನು ಹೊಂದುವ ಭರಾಟೆಯಲ್ಲಿ ಅರಣ್ಯಗಳು/ಕಾಡುಗಳು ನಾಶವಾಗುತ್ತಿವೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದನ್ನು ತಗ್ಗಿಸಲು ಇರುವ ಪರಿಹಾರೋಪಾಯವೆಂದರೆ ಗಿಡಗಳನ್ನು ಬೆಳೆಸಿ ಅವನತಿಗೊಳಗಾದ ಕಾಡುಗಳನ್ನು ಮರುಸ್ಥಾಪಿಸುವುದು. ಅರಣ್ಯಗಳಲ್ಲಿನ ವೃಕ್ಷಗಳು ಹಸಿರುಮನೆ ಅನಿಲವಾದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ತನ್ನೊಳಗೆ ಹಾಗೂ ಮಣ್ಣಿನೊಳಗೆ ಸಂಗ್ರಹಿಸಿಟ್ಟುಕೊಳ್ಳಬಲ್ಲವು, ಹಾಗಾಗಿ ಯಾವುದೇ ಒಂದು ಪ್ರದೇಶದ ನೈಸರ್ಗಿಕ ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಮಹತ್ವವುಳ್ಳದ್ದಾಗಿರುವ ಗಿಡ ಮರಗಳನ್ನು ಬೆಳೆಸಿ ಕಾಡುಗಳನ್ನು ಮರುಸ್ಥಾಪಿಸುವಂತಹ ತಂತ್ರವನ್ನು ಹಲವು ಕಾರ್ಯಸೂಚಿಗಳು ಬಳಸುತ್ತಿವೆ.